ಚನ್ನಕೇಶವ ಸ್ವಾಮಿ ದೇವಾಲಯದ ಹುಂಡಿಯ ಹಣ 41 ಲಕ್ಷ 39 ಸಾವಿರ ಆದಾಯ

 ಬೇಲೂರು: ಚನ್ನಕೇಶವ ಸ್ವಾಮಿ ದೇವಾಲಯದ ಹುಂಡಿಯ ಹಣ ೪೧ ಲಕ್ಷ ೩೯ ಸಾವಿರ ಆದಾಯ ಬಂದಿದೆ ಎಂದು ಸಕಲೇಶಪುರ ಉಪವಿಭಾಗದಿಕಾರಿ ಡಾ ಶ್ರುತಿ ಹೇಳಿದರು.



ಚನ್ನಕೇಶವ ಸ್ವಾಮಿ ದೇಗುಲದ ಹುಂಡಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ತೆರೆಯಲಾಗಿದ್ದು ಕಳೆದ ಬಾರಿ ದಿನಾಂಕ ೬-೩-೨೦೨೫ ರಂದು ಹುಂಡಿ ತೆರದ ಸಂದರ್ಭದಲ್ಲಿ ೨೧,ಲಕ್ಷದ ೩೨ ಸಾವಿರ ೭೪೦ ರೂ ಆದಾಯ ಬಂದಿತ್ತು ಅದರಂತೆ ಮೂರು ತಿಂಗಳ ನಂತರ ರಥೋತ್ಸವ ಮುಗಿದ ಬಳಿಕ ೧೧-೬-೨೦೨೫

ರಂದು ಹುಂಡಿ ಹಣ ತೆರದು ಬ್ಯಾಂಕಿನ ಸಿಬ್ಬಂದಿಗಳು ಹಾಗು ದೇಗುಲದ ಸಿಬ್ಬಂದಿಗಳು ಯುನೈಟೆಡ್ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳು ಏಣಿಕೆಯಲ್ಲಿ ಭಾಗವಹಿಸಿ ಈ ಬಾರಿ ಹುಂಡಿ ಏಣಿಕೆ ಮೊತ್ತ ೪೧ ಲಕ್ಷದ ೩೯ ಸಾವಿರದ ೯೬೩ ರೂಗಳು ಬಂದಿದ್ದು ಈ ಹಣದಿಂದ ದೇಗುಲದ ಸಿಬ್ಬಂದಿಗಳ ಸಂಬಳ ಸೇರಿದಂತೆ ಇನ್ನಿತರ ದೇವಾಲಯದ ಕಾರ್ಯಗಳಿಗೆ ಹಣ ಬಳಸಲಾಗುತ್ತದೆ.ಪ್ರತಿನಿತ್ಯ ಬಂದಂತ ಸಾವಿರಾರು ಭಕ್ತರಿಗೆ ಹಾಗು ಪ್ರವಾಸಿಗರಿಗೆ ಮದ್ಯಾಹ್ನ ಹಾಗು ರಾತ್ರಿ ದಾಸೋಹ ವ್ಯವಸ್ಥೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ದೇಗುಲದ ಇಒ ಯೊಗೇಶ್,ಹೆಚ್ ಡಿ ಎಫ್ ಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್,ಕಂದಾಯ ಇಲಾಖೆ ಹನುಮಂತು ಹಾಗು ದೇವಾಲಯದ ಸುಧಾಕರ್ ಯುನೈಟೆಡ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಎಂಡಿ ದಿನೇಶ್ ಹಾಜರಿದ್ದರು.

Post a Comment

Previous Post Next Post