ಎಸ್ .ಪಿ .ಎಂ‌. ಪಿಯು ಕಾಲೇಜಿನಲ್ಲಿ ಓರಿಯಂಟೇಶನ್ ಡೇ ಮತ್ತು ಪೋಷಕರ ಸಭೆ

ಹಾಸನ್ ನ್ಯೂಸ್ ,ಹಾಸನ: ಹಾಸನದ ಎಸ್‌ಪಿಎಂ ಪದವಿ ಪೂರ್ವ ಕಾಲೇಜಿನಲ್ಲಿ  ಓರಿಯಂಟೇಶನ್ ಡೇ ಹಾಗೂ ಪೋಷಕರ ಸಭೆ ಆಡಿಯೋ-ವಿಜುವಲ್ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಿತು. 

ವಿದ್ಯಾರ್ಥಿಗಳ ಶೈಕ್ಷಣಿಕ ಮುಂದಾಳತ್ವ ಹಾಗೂ ಪೋಷಕರ ಸಹಭಾಗಿತ್ವ ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಶ್ರೀ ಪುಷ್ಪಗಿರಿ ಮಹಾಸಂಸ್ಥಾನ, ಹಳೇಬೀಡು ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು ದಿವ್ಯ ಸಾನಿಧ್ಯ ನೀಡಿದರು. ಅವರು ವಿದ್ಯಾರ್ಥಿಗಳ ಸಂಸ್ಕಾರ ಹಾಗೂ ಉಜ್ವಲ ಭವಿಷ್ಯ ಕುರಿತು ಆಶೀರ್ವಚನ ನೀಡಿ, ಪೋಷಕರ ಸಹಭಾಗಿತ್ವವನ್ನು ಉಲ್ಲೇಖಿಸಿದರು.

ಕಾರ್ಯಕ್ರಮದ ಪ್ರಮುಖ ಉಪನ್ಯಾಸಕರಾಗಿ ಆಗಮಿಸಿದ ಡಾ. ಗುರು ಬಸವರಾಜ್ ಎಲಗಚ್ಚಿ ,ಅಸಿಸ್ಟೆಂಟ್ ಪ್ರೊಫೆಸರ್, ಎಸ್‌ಡಿಎಮ್ ಆಯುರ್ವೇದ ಕಾಲೇಜು, ಹಾಸನ, ಅವರು ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸ್ಪಷ್ಟವಾಗಿ ನಿಗದಿಪಡಿಸಬೇಕು ಹಾಗೂ ಪೋಷಕರು ಅವರ ಮುಂದಾಳತ್ವಕ್ಕೆ ಪಾಠದರ್ಶಿಯಾಗಿ ನಿಂತು ಬೆಂಬಲ ನೀಡಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್‌ಪಿಎಂ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಆಡಳಿತಾಧಿಕಾರಿ ಡಾ.ಶಿವಕುಮಾರ್,  ತಮ್ಮ ಭಾಷಣದಲ್ಲಿ ಶಿಸ್ತು, ನೈತಿಕತೆ ಹಾಗೂ ಪರಿಶ್ರಮದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಎಸ್‌ಪಿಎಂ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅರ್ಪಿತ ಜಿ.ಪಿ. ಅವರು ಕಾಲೇಜಿನ ನಿಬಂಧನೆಗಳು, ವಿದ್ಯಾರ್ಥಿಗಳ ಕರ್ತವ್ಯಗಳು ಮತ್ತು ಹಿರಿಯರ ಪ್ರತಿ ಗೌರವದ ಕುರಿತು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಶ್ರೀಯುತ ಎಸ್.ಪಿ. ಹಿರಣ್ಣಯ್ಯ, ಸಹಕಾರ್ಯದರ್ಶಿ, ಶ್ರೀಮಠ ಪುಷ್ಪಗಿರಿ ಅವರು ವಿದ್ಯಾರ್ಥಿಗಳಿಗೆ ಸಂಸ್ಕಾರ ಹಾಗೂ ಶಿಸ್ತಿನ ಕುರಿತು ಮಾರ್ಗದರ್ಶನ ನೀಡಿದರು.

Post a Comment

Previous Post Next Post