ಹಾಸನ : ಬಿಜೆಪಿ ಪಕ್ಷದ ಸಂಘಟನೆ ನಡೆಯುತ್ತಿದ್ದು, ಇದರ ಮುಂದುವರೆದ ಭಾಗವಾಗಿ ಕರ್ನಾಟಕ ಬಿಜೆಪಿಯು 10 ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ. ಈ ಕುರಿತು ಅಧಿಕೃತ ಪ್ರಕಟಣೆಯನ್ನು ಚುನಾವಣಾಧಿಕಾರಿ ಕ್ಯಾ. ಗಣೇಶ್ ಕಾರ್ಣಿಕ್ ಅವರು ಹೊರಡಿಸಿದ್ದು ಅದರಂತೆ ಹಾಸನ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಸಿದ್ದೇಶ್ ನಾಗೇಂದ್ರ ಅವರನ್ನು ನೇಮಕ ಮಾಡಲಾಗಿದೆ.
ದೇಶದಾದ್ಯಂತ ಪಕ್ಷದ ಸಂಘಟನಾ ಪರ್ವ 2024-25 ನಡೆಯುತ್ತಿದ್ದು, ಇದರ ಅಂಗವಾಗಿ ರಾಜ್ಯದಲ್ಲಿ ಎರಡನೇ ಹಂತದಲ್ಲಿ ಉಳಿದಿರುವ 10 ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಲಾಗಿದೆ. ಆಯ್ಕೆಯಾದ ಹತ್ತು ನೂತನ ಅಧ್ಯಕ್ಷರಿಗೆ ಚುನಾವಣಾಧಿಕಾರಿ ಕ್ಯಾ.ಗಣೇಶ್ ಕಾರ್ಣಿಕ್ ಅಭಿನಂದನೆ ಸಲ್ಲಿಸಿದ್ದಾರೆ.ನೂತನ ಅಧ್ಯಕ್ಷರ ವಿವರ:
- ಉಡುಪಿ – ಕುತ್ಯಾರು ನವೀನ್ ಶೆಟ್ಟಿ
- ಮೈಸೂರು ಗ್ರಾಮಾಂತರ – ಕೆಎನ್ ಸುಬ್ಬಣ್ಣ
- ಹಾಸನ – ಸಿದ್ದೇಶ್ ನಾಗೇಂದ್ರ
- ಕೊಡಗು – ರವಿ ಕಾಳಪ್ಪ
- ದಾವಣಗೆರೆ – ಎನ್ ರಾಜಶೇಖರ
- ಹಾವೇರಿ – ವಿರೂಪಾಕ್ಷಪ್ಪ ಬಳ್ಳಾರಿ
- ಚಿತ್ರದುರ್ಗ – ಕೆ.ಟಿ. ಕುಮಾರಸ್ವಾಮಿ
- ತುಮಕೂರು – ಎಚ್.ಎಸ್. ರವಿಕುಮಾರ್ (ಹೆಬ್ಬಾಕ)
- ಮಧುಗಿರಿ – ಚಿದಾನಂದ ಗೌಡ-
- ಚಿಕ್ಕಬಳ್ಳಾಪುರ – ಎಸ್.ವಿ. ರಾಮಚಂದ್ರ ಗೌಡ (ಸೀಕಲ್)


Post a Comment