ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಬಿಟಿ ಕೊಪ್ಪಲು ನಿವಾಸಿ ನಂದೀಶ್ ನಿವಾಸಕ್ಕೆ ಶಾಸಕ ಸ್ವರೂಪ್ ಭೇಟಿ

 ಹಾಸನ: ಇತ್ತೀಚೆಗೆ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದ ಹಾಸನ ನಗರದ ಬಿಟಿ ಕೊಪ್ಪಲ್ಲಿನ ನಂದೀಶ್ ಅವರ ನಿವಾಸಕ್ಕೆ ಇಂದು ಶಾಸಕ ಸ್ವರೂಪ ಪ್ರಕಾಶ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಕೆಎಸ್ಆರ್ಟಿಸಿ ನೌಕರರಾಗಿದ್ದ ನಂದೀಶ್ ಬೆಳಗ್ಗೆ ವಾಕಿಂಗ್ ಮಾಡುವ ಬೆಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದರು. ಇಂದು ಶಾಸಕ ಸ್ವರೂಪ್ ಪ್ರಕಾಶ್ ನಗರಸಭೆ ಸದಸ್ಯ ವಾಸು ಅವರೊಂದಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದರು.



ಈ ವೇಳೆ ಕುಟುಂಬದ ಸದಸ್ಯರು ಈ ಅಚಾತುರ್ಯ ನಡೆಯಲು ಕೆಇಬಿ ಅಧಿಕಾರಿಗಳೇ ಕಾರಣ, ಕಂಬ ಮುರಿದು ಬೀಳುವ ಸ್ಥಿತಿಯಲ್ಲಿ ಇದ್ದ ಬಗ್ಗೆ ಹಾಗೂ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ ಎಂಬ ಬಗ್ಗೆ ಹಲವು ಬಾರಿ ದೂರುಗಳನ್ನು ನೀಡಿದರು ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಕಾರಣ ಈ ಅವಘಡ ನಡೆದಿದೆ ಇದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ತಮ್ಮ ಅಳಲು ತೋಡಿಕೊಂಡರು.

ಶಾಸಕ ಸ್ವರೂಪ್ ಪ್ರಕಾಶ್ ಅವರು ಮೃತರ ನಿವಾಸಕ್ಕೆ ಕೆಇಬಿ ಅಧಿಕಾರಿಗಳನ್ನು ಕರೆಸಿ ಅವಘಡ ನಡೆಯಲು ಕಾರಣದ ಬಗ್ಗೆ ಮಾಹಿತಿ ಪಡೆದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀರ್ವ ತರಾಟೆಗೆ ತೆಗೆದುಕೊಂಡ ಅವರು ವಿದ್ಯುತ್ ತಂತಿ ಅಪಘಾತದ ಮುನ್ಸೂಚನೆ ನೀಡುತ್ತಿದ್ದರು ಎಚ್ಚೆತ್ತುಕೊಳ್ಳದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಈ ರೀತಿಯ ಅವಘಡಗಳು ನಡೆದರೆ ತಮ್ಮ ವಿರುದ್ಧ ಕ್ರಮ ಜರುಗಿಸಲಾಗುವುದು, ಈ ಅನಾಹುತ ನಡೆಯಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಇದರ ಹೊಣೆ ನೀವೇ ಹೊರಬೇಕು. ಕುಟುಂಬಕ್ಕೆ ಆಧಾರವಾಗಿದ್ದ ಆನಂದ್ ಅವರ ಸಾವಿಗೆ ನೀವೇ ಕಾರಣ ಎಂದು ತೀರ್ವ ಅಸಮಾಧಾನ ವ್ಯಕ್ತಪಡಿಸಿದರು.

Post a Comment

Previous Post Next Post