ಜಿಲ್ಲೆಯಲ್ಲಿ ನಿಲ್ಲದ ಕಾಡಾನೆ-ಮಾನವನ ನಡುವಿನ ಸಂಘರ್ಷ

 ಹಾಸನ : ಜಿಲ್ಲೆಯಲ್ಲಿ ನಿಲ್ಲದ ಕಾಡಾನೆ-ಮಾನವನ ನಡುವಿನ ಸಂಘರ್ಷ. ಕಾಡಾನೆ ದಾಳಿಗೆ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ.

ಈ ಘಟನೆ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಬೈಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಷಣ್ಮುಖ (36) ಎಂಬಾತ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾನೆ.



ಮೃತಪಟ್ಟ ವ್ಯಕ್ತಿ ಹನ್ನೆರಡು ಎಕರೆ ಕಾಫಿ ತೋಟ ಹೊಂದಿದ್ದು, ಇಂದು(ಏಪ್ರಿಲ್‌.25) ಬೆಳಿಗ್ಗೆ ಕಾಫಿ ತೋಟಕ್ಕೆ ತೆರಳಿದ್ದರು. ಆದರೆ ಆತ ಮಧ್ಯಾಹ್ನವಾದರೂ ಮನೆಗೆ ಬಾರದ ಕಾರಣಷಣ್ಮುಖ ಅವರನ್ನು ಹುಡುಕಿಕೊಂಡು ಕಾಫಿ ತೋಟಕ್ಕೆ ಕುಟುಂಬಸ್ಥರು ತೆರಳಿದ್ದರು.

ಈ ವೇಳೆ ಕುಟುಂಬಸ್ಥರಿಗೆ ಕಾಫಿ ತೋಟದಲ್ಲಿ ಷಣ್ಮುಖ ಶವ ಪತ್ತೆಯಾಗಿದ್ದು, ಷಣ್ಮುಖನನ್ನು ಭೀಕರವಾಗಿ ಕಾಡಾನೆ ತುಳಿದು ಹತ್ಯೆ ಮಾಡಿದೆ. ಈ ಮೃತದೇಹವನ್ನು ನೋಡಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಕಳೆದ ಮೂರು ದಿನಗಳ ಹಿಂದೆ ಹೆಬ್ಬನಹಳ್ಳಿ ಗ್ರಾಮದಲ್ಲಿ ರಘು ಎಂಬುವವರ ಮೇಲೆ ದಾಳಿ ಮಾಡಿದ್ದ ಕಾಡಾನೆ ಮಾಡಿತ್ತು. ಇದರ ಬೆನ್ನಲ್ಲೇ ಈ ದುರಂತ ನಡೆದಿದೆ.

ಈ ಪ್ರಕರಣವೂ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನೂ ಈ ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Post a Comment

Previous Post Next Post