ಹಾಸನ : ಚಲಿಸುತ್ತಿದ್ದ ರೈಲಿನಿಂದ ಕಾಲು ಜಾರಿ ನದಿಗೆ ಬಿದ್ದ ವಿದ್ಯಾರ್ಥಿ
ನದಿಯಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರಿಂದ ಬದುಕುಳಿದ ವಿದ್ಯಾರ್ಥಿ
ಮುಜಾಮಿಲ್ (17) ಪ್ರಾಣಾಪಾಯದಿಂದ ಪಾರಾದ ಬಾಲಕ
ಹಾಸನ ಜಿಲ್ಲೆ, ಹೊಳೆನರಸೀಪುರ ಪಟ್ಟಣದಲ್ಲಿ ಘಟನೆ
ಹಾಸನದ ಎಚ್‌ಕೆಎಸ್ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಮುಜಾಮಿಲ್
ಕೆ.ಆರ್.ನಗರದಿಂದ ಹಾಸನಕ್ಕೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಬರುತ್ತಿದ್ದ ಮುಜಾಮಿಲ್
ಚಲಿಸುತ್ತಿದ್ದ ರೈಲ್ವೆ ಬೋಗಿಯ ಮೆಟ್ಟಿಲ ಮೇಲೆ ಒಂದು ಕಾಲಿಟ್ಟು, ಇನ್ನೊಂದು ಕಾಲು ಬೋಗಿಯಿಂದ ಹೊರಗಾಕಿ ಹಾಕಿಕೊಂಡು ನಿಂತಿದ್ದ ಮುಜಾಮಿಲ್
ಈ ವೇಳೆ ಆಯತಪ್ಪಿ 70 ರಿಂದ 80 ಅಡಿ ಎತ್ತರದಿಂದ ಹೇಮಾವತಿ ನದಿಗೆ ಬಿದ್ದ ಮುಜಾಮಿಲ್
ಹೇಮಾವತಿ ನದಿಯಲ್ಲಿ ಕಡಿಮೆ ಇದ್ದ ನೀರಿನ ಹರಿವಿನ ಪ್ರಮಾಣ
ಹರಿಯುವ ನೀರಿನ ಮಧ್ಯೆ ಬಂಡೆ ಹಿಡಿದು ಕಿರುಚಾಡುತ್ತಿದ್ದ ಮುಜಾಮಿಲ್
ಮುಜಾಮಿಲ್ ಕಿರುಚಾಟ ಕೇಳಿ ನದಿಗೆ ಇಳಿದು ರಕ್ಷಿಸಿದ ಸ್ಥಳೀಯರು
ಮುಜಾಮಿಲ್‌ನನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಜಾಮಿಲ್
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

.jpeg)

Post a Comment