ಬಾಣಾವರ ಟೋಲ್ ಬಳಿ ಭೀಕರ ಅಪಘಾತ: ಕಾರು-ಅಜಕ್ ಡಿಕ್ಕಿ, ಯುವಕ ಸಾವು

 ಅರಸೀಕೆರೆ : ಬಾಣಾವರ ಟೋಲ್ ಬಳಿ ಮಂಗಳವಾರ (ಫೆಬ್ರವರಿ 21) ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಹೇಮಂತ್ (23) ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.



ಬೆಂಗಳೂರು ಶ್ರೀನಿವಾಸನಗರದ ನಿವಾಸಿಗಳಾದ ತಾತ-ಮೊಮ್ಮಗ ಜೋಡಿ KA-02-MG-4985 ನಂಬರ್‌ನ ವ್ಯಾಗನರ್ ಕಾರಿನಲ್ಲಿ ಚಿಕ್ಕಮಗಳೂರು ಕಡೆಗೆ ತೆರಳುತ್ತಿದ್ದರು. ಈ ವೇಳೆ ಅತೀ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿದ ಕಾರು ಅಜಕ್ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದು, ನಂತರ ರಸ್ತೆ ಬದಿಯ ಹೈಮಾಸ್ಟ್ ಲೈಟ್ ಕಂಬಕ್ಕೆ ಗುದ್ದಿದೆ.

ಹೇಮಂತ್ ಸ್ಥಳದಲ್ಲೇ ಸಾವನ್ನಪ್ಪಿದನು. ತಾತ ಲಕ್ಷ್ಮಣಯ್ಯ (75) ನವರ ಸ್ಥಿತಿ ಗಂಭೀರವಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಅಜಕ್ ವಾಹನವೂ ಪಲ್ಟಿಯಾದಗಿದ್ದು, ಅದರ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅಪಘಾತದ ಸ್ಥಳಕ್ಕೆ ಬಾಣಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳಿಗೆ ತಕ್ಷಣವೇ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕುರಿತು ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

Previous Post Next Post