ಪಾರು - ಪಾರ್ವತಿ ಚಿತ್ರಕ್ಕೆ ಎಲ್ಲರ ಬೆಂಬಲ ಅಗತ್ಯ: ನಟಿ ದೀಪಿಕಾ ದಾಸ್

ಹಾಸನ: ರಾಜ್ಯಾದ್ಯಂತ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಪಾರು ಪಾರ್ವತಿ ಚಿತ್ರಕ್ಕೆ ತಮ್ಮೆಲ್ಲರ ಬೆಂಬಲ ಅಗತ್ಯ, ಹೆಚ್ಚಿನ ಸಂಖ್ಯೆಯ ಜನರು ಚಿತ್ರವನ್ನು ವೀಕ್ಷಿಸಿ ಉದಯೋನ್ಮುಖ ಕಲಾವಿದರಿಗೆ ಬೆಂಬಲ ನೀಡಬೇಕು ಎಂದು ನಟಿ ದೀಪಿಕಾ ದಾಸ್ ಮನವಿ ಮಾಡಿದರು.



ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಜನಿಸಿ ಪ್ರಾಥಮಿಕ ಶಿಕ್ಷಣ ಪಡೆದ ತಾನು ಆರಂಭದಲ್ಲಿ ಕಿರುತೆರೆ ನಟಿಯಾಗಿ ಬದುಕು ಕಟ್ಟಿಕೊಂಡು ಇದೀಗ ಸಿನಿಮಾ ರಂಗಕ್ಕೂ ಕಾಲಿಟ್ಟು ಚೊಚ್ಚಲ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಈಗಾಗಲೇ ರಾಜ್ಯದಲ್ಲಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು ತವರು ಜಿಲ್ಲೆಯಾದ ಹಾಸನದಲ್ಲಿ ಕೂಡ ಸಿನಿಮಾ ಯಶಸ್ವಿ ಮಾಡಿ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ರೋಹಿತ್ ಕೀರ್ತಿ ಅವರು ನಿರ್ದೇಶಿಸಿರುವ ಚಿತ್ರ ಇದಾಗಿದ್ದು  ಕೇರಳ ಮೂಲದ ಪವನ್ ಮಿಶ್ರ ಹಾಗೂ ಇನ್ನಿತರ ಕನ್ನಡದ ಪ್ರಮುಖ ಕಲಾವಿದರು  ತೆರೆ ಹಂಚಿಕೊಂಡಿದ್ದಾರೆ.  ಎಂದು ಮಾಹಿತಿ ನೀಡಿದರು.

ನಿರ್ದೇಶಕ ರೋಹಿತ್ ಕೀರ್ತಿ ಮಾತನಾಡಿ, ಡಿ.31 ರಂದು ಚಿತ್ರ ತೆರೆ ಕಂಡಿದ್ದು ರಾಜ್ಯ ಹಾಗೂ ವಿದೇಶಗಳಲ್ಲಿ ಕೂಡ ಚಿತ್ರ ಬಿಡುಗಡೆಯಾಗಿದೆ, ಕರ್ನಾಟಕ ಹಾಗೂ ಹೊರ ರಾಜ್ಯ ಹಾಗೂ ವಿದೇಶಗಳಲ್ಲೂ ಚಿತ್ರೀಕರಣ ವಾಗಿರುವ ಚಿತ್ರದಲ್ಲಿ ಹಾಸ್ಯ, ಕೌಟುಂಬಿಕ ಬಾಂಧವ್ಯ, ಹಾಗೂ   ವಯಸ್ಕರ ಹಾಗೂ ಯುವ ಸಮುದಾಯದ ಭಾವನೆಗಳನ್ನು ವ್ಯಕ್ತಪಡಿಸುವ ಚಿತ್ರ ಇದಾಗಿದ್ದು ಕುಟುಂಬ ಸಮೇತ ವೀಕ್ಷಿಸಬಹುದಾಗಿದೆ ಎಂದರು.

ಬೆಳೆದವರ ಹೆಸರು ಬಳಸಿಕೊಂಡು ಗುರುತಿಸಿಕೊಳ್ಳಲ್ಲ
ನಟ ಯಶ್ ಬಗ್ಗೆ ದೀಪಿಕಾ ದಾಸ್ ಹೇಳಿಕೆ

ತಾವು ನಟ ಯಶ್ ಅವರ ಸಹೋದರಿ ಆಗಿದ್ದರು ಅದನ್ನು ಬಹಿರಂಗವಾಗಿ ಯಾಕೆ ಹೇಳಿಕೊಳ್ಳುವುದಿಲ್ಲ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ದೀಪಿಕಾ ದಾಸ್ ತಾನು ಸ್ವತಂತ್ರವಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂದುಕೊಂಡವರ ಪೈಕಿ ತಾನು ಒಬ್ಬಳು ಈಗಾಗಲೇ ಬೆಳೆದು ದೊಡ್ಡ ಹೆಸರು ಮಾಡಿರುವವರ  ಹೆಸರು ಬಳಸಿಕೊಂಡು ಬೀಳೆಯುವ ಉದ್ದೇಶ ನನ್ನದಲ್ಲ    ಎಂದರು.

ವೃತ್ತಿಯೇ ಬೇರೆ ವೈಯಕ್ತಿಕವೇ ಬೇರೆ ಎರಡನ್ನೂ ಒಟ್ಟಿಗೆ ಸೇರಿಸುವುದಿಲ್ಲ, ಯಶ್ ಮತ್ತು ನನ್ನ ಬಗ್ಗೆ ಒಳ್ಳೆಯ ಬಾಂಧವ್ಯ ಇದೆ ಅವರ ಸಿನಿಮಾಗಳನ್ನು ನೋಡಿ ಹಲವು ವಿಚಾರಗಳನ್ನು ತಾನು ತಿಳಿಸಿಕೊಂಡಿದ್ದೇನೆ. ಅದೇ ರೀತಿ ಅವರು ಕೂಡ ತನ್ನ ಸಿನಿಮಾಗಳನ್ನು ನೋಡಿ ಪ್ರಶಂಸೆ ವ್ಯಕ್ತ ಪಡಿಸುತ್ತಾರೆ, ಆದುದರಿಂದ ಅವರ ಸಹೋದರಿ ಎಂಬುದನ್ನು ಪ್ರಸ್ತಾಪ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಈ ವೇಳೆ ನಾಯಕ ನಟ ಪವನ್  ಮಿಶ್ರಾ ಹಾಗೂ ಚಿತ್ರತಂಡದ ಇತರ ಕಲಾವಿದರು ಇದ್ದರು

Post a Comment

Previous Post Next Post