ದೇಶಭಕ್ತಿ ಮೂಡಿಸುವ ಶಿಕ್ಷಣ ಅಗತ್ಯ: ನಿಶ್ಚಲಾನಂದ ಸ್ವಾಮೀಜಿ

 ಚನ್ನರಾಯಪಟ್ಟಣ: ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವ ಶಿಕ್ಷಣ ಅಗತ್ಯವಿದೆ ಎಂದು ಬೆಂಗಳೂರಿನ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಮಠಾಧೀಶರಾದ ನಿಶ್ಚಲಾನಂದ  ಸ್ವಾಮೀಜಿ ಹೇಳಿದರು.

ಪಟ್ಟಣದ ಶಾಲಿನಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ ಶಾಲಿನಿ ಪರಂಪರೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ರಾಷ್ಟ್ರಪ್ರೇಮವನ್ನು ಮಕ್ಕಳಿಗೆ ಕಲಿಸಬೇಕು. ಶಿಕ್ಷಣ ವ್ಯಕ್ತಿಯ ವ್ಯಕ್ತಿತ್ವವನ್ನ ನಿರ್ಮಾಣ ಮಾಡುತ್ತದೆ. ಯುವ ಜನಾಂಗ ರಾಷ್ಟ್ರಪ್ರೇಮ ಬೆಳೆಸಿಕೊಂಡು ನಮ್ಮ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡಿ ದೇಶದ ಆಸ್ತಿ ಆಗಬೇಕು ಎಂದರು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳು 5 ಕೋಟಿ ಗಿಡ ನೆಡುವ ಸಂಕಲ್ಪ ಮಾಡಿದ್ದ ಯೋಜನೆಯನ್ನು ಪರಿಸರ ಪ್ರೇಮಿ ಸಿ.ಎನ್.ಅಶೋಕ್ ಸಾಕಾರಗೊಳಿಸಿದ್ದಾರೆ ಎಂದರು.

ಶಾಸಕ ಸಿ.ಎನ್ ಬಾಲಕೃಷ್ಣ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಪಾಲಿಸಬೇಕು ಎಂದರು.ರಾಷ್ಟ್ರ ಪರಿಸರ ಪ್ರಶಸ್ತಿ ಪುರಸ್ಕೃತ ಸಿ.ಎನ್. ಅಶೋಕ್ ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಡಾ. ನಾಗರಾಜ್, ತಹಸೀಲ್ದಾ‌ರ್ ಹುದ್ದೆಯಿಂದ, ಅಪರ ಜಿಲ್ಲಾಧಿಕಾರಿಯವರೆಗೆ ಕಾರ್ಯನಿರ್ವಹಿಸಿ ಬಡವರ ರೈತರ ಪರ ಕಾರ್ಯ ಮಾಡಿದ್ದರು ಎಂದರು.

ಶಾಲಿನಿ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಡಾ. ಮೇಘನ, ಎಂಜಿನಿಯರ್‌ಗಳಾದ ಯೋಗಾಶ್ರೀ, ರಕ್ಷಿತ್, ವಕೀಲೆ ಆಶಿಕ ಜೈನ್ ಮಾತನಾಡಿ, ಶಾಲಿನಿ ಶಾಲೆಯ ಶಿಕ್ಷಕರಿಂದ ತಾವು ಪಡೆದ ಶಿಕ್ಷಣ ಮೌಲ್ಯದ ಬಗ್ಗೆ ನೆನಪು ಮಾಡಿಕೊಂಡರು.

Post a Comment

Previous Post Next Post