ಮನುಕುಮಾರ್‌ಗೆ ಇರಿತ ಪ್ರಕರಣ ಮತ್ತೊಂದು ತಿರುವು

 ಮನುಕುಮಾರ್‌ಗೆ ಇರಿತ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.

ಆರೋಪಿ ಭವಾನಿ, ಪೊಲೀಸರಿಗೆ ಮಾಡಿರುವ ಮೆಸೇಜ್‌ನಲ್ಲಿ ಮನುಕುಮಾರ್‌ಗೂ ನನಗೂ ಮದುವೆ ಆಗಿದೆ ಎಂದು ತಿಳಿಸಿದ್ದಾಳೆ.

ಇದಕ್ಕೆ ಪುರಾವೆಯಾಗಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಬ್ಬರೂ ನೋಂದಣಿ ಮಾಡಿಸಿಕೊಂಡಿರುವ ಸರ್ಟಿಫಿಕೇಟ್ ಸಹ ವಾಟ್ಸಾಪ್ ಮಾಡಿದ್ದಾಳೆ. ಅದರಲ್ಲಿ ೨೦೨೩ ನ.೧೦ ರಂದೇ ಮದುವೆಯಾಗಿದ್ದಾರೆ ಎನ್ನಲಾಗಿದ್ದು, ೨೦೨೪ ಅ.೨೫ ರಂದು ನೋಂದಣಿ ಮಾಡಿಸಿರುವ ದಿನಾಂಕ ನಮೂದಾಗಿದೆ.

ಮುಂದುವರಿದು, ಆತ ನನ್ನೊಂದಿಗೆ ಮದುವೆ ಆಗಿ ತುಂಬಾ ಜನರ ಜೊತೆ ಅಫೇರ್ ಇಟ್ಟುಕೊಂಡಿದ್ದ. ಹೊಸವರ್ಷದ ಪಾರ್ಟಿಗೂ ಹುಡುಗಿ ಕರೆದುಕೊಂಡು ಹೋಗಿದ್ದ. ಅದು ಗೊತ್ತಾಗಿಯೇ ನಾನು ಹೋಗಿ ಜಗಳ ಮಾಡಿದ್ದು ಎಂದು ತಿಳಿಸಿದ್ದಾಳೆ.

ಈ ವಿಚಾರದಲ್ಲಿ ಅವರ ಮನೆಯಲ್ಲಿ ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ, ನನಗೆ ನ್ಯಾಯಕೊಡಿಸಿ ಎಂದು ಮನವಿ ಮಾಡಿದ್ದಾಳೆ. ಗುರುವಾರ ಭವಾನಿಯನ್ನು ಬಂಧಿಸಿದ್ದ ಬಡಾವಣೆ ಪೊಲೀಸರು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ೧೪ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Post a Comment

Previous Post Next Post