ಅಮೋಘ್ ವಾಹಿನಿಯ ಮುಖ್ಯಸ್ಥರಾದ ಕೆ.ಪಿ.ಎಸ್. ಪ್ರಮೋದ್ ಅವರಿಗೆ ಫ್ರಾಂಕ್ ವರ್ಲ್ಡ್ ಇಂಟರ್ನ್ಯಾಷನಲ್ ಯೂನಿವರ್ಸಿಟಿ, ವಾಷಿಂಗ್ಟನ್ ವತಿಯಿಂದ ಗೌರವ ಡಾಕ್ಟರೇಟ್ ಲಭಿಸಿದೆ. ಇದು ಸಮಾಜಸೇವಾ ಕ್ಷೇತ್ರದಲ್ಲಿ ತಮ್ಮ 25 ವರ್ಷಗಳ ಸುಧೀರ್ಘ ಸೇವೆಗೆ ಸಂದ ಗೌರವವಾಗಿದ್ದು, ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಲಾಯಿತು.
ನವದೆಹಲಿಯ ನೋಯಿಡಾ ದಲ್ಲಿ ಇಂದು ಫ್ರಾಂಕ್ ವರ್ಲ್ಡ್ ಇಂಟರ್ನ್ಯಾಷನಲ್ ಯೂನಿವರ್ಸಿಟಿ, ವಾಷಿಂಗ್ಟನ್ ನ ಡಾಕ್ಟರೇಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಷ್ಟಿತ ಫ್ರಾಂಕ್ ವರ್ಲ್ಡ್ ಇಂಟರ್ನ್ಯಾಷನಲ್ ಯೂನಿವರ್ಸಿಟಿಯು ಮೂರು ವರ್ಷಗಳಿಗೊಮ್ಮೆ ಗೌರವ ಡಾಕ್ಟರೇಟ್ ನ್ನು ನೀಡುತ್ತಾ ಬಂದಿದ್ದು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಾಗೂ ಸೇವೆಗೈದಿರುವ 50 ಭಾರತೀಯರನ್ನು ಗುರುತಿಸಿ ಅವರಿಗೆ ಡಾಕ್ಟರೇಟ್ ನೀಡಿದೆ. ಅದರಲ್ಲಿ ಕರ್ನಾಟಕ ರಾಜ್ಯದಿಂದ ಹಾಸನ ಮೂಲದವರಾದ ಕೆ.ಪಿ.ಎಸ್ ಪ್ರಮೋದ್ ಅವರಿಗೆ ಡಾಕ್ಟರೇಟ್ ಲಭಿಸಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ಕೆ.ಪಿ.ಎಸ್. ಪ್ರಮೋದ್ ಅವರು ಕಳೆದ 25 ವರ್ಷಗಳಿಂದ ಅನೇಕ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿದ್ದಾರೆ.
ಜೆಸಿಐ ಸಂಸ್ಥೆಯ ಸದಸ್ಯರಾಗಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು ಹಲವು ಸಮಾಜಮುಖಿ ಕೆಲಸಗಳನ್ನು ನಿರ್ವಹಿಸಿದ್ದಾರೆ. ಬೆಂಗಳೂರಿನ ಮಾತೃ ಫೌಂಡೇಶನ್ ನ ಜೊತೆಗೂಡಿ 26 ಅಂಗವಿಕಲ ಹೆಣ್ಣು ಮಕ್ಕಳಿಗೆ ನೆರವಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ ನ ಸಹಯೋಗದಲ್ಲಿ ಹಲವಾರು ಸಮಾಜಮುಖಿ ಕೆಲಸಗಳನ್ನು ಸಹ ಕೈಗೊಂಡಿದ್ದಾರೆ. ಕೊರೋನ ಮಹಾಮಾರಿಯಂತಹ ಸಂದರ್ಭದಲ್ಲಿಯೂ ತಮ ಸೇವಾ ಮನೋಭಾವದಿಂದ ಇತರರ ಸಂಕಷ್ಟಗಳಿಗೆ ನೆರವಾಗಿದ್ದು, ಸಮಾಜದ ಒಳಿತಿಗಾಗಿ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಾ ಬಂದಿರುವ ಇವರ ಸೇವೆಯನ್ನು ಗುರುತಿಸಿ ಇಂದು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು.
ವಿಶೇಷತೆಯೆಂದರೆ, ಸಮಾಜ ಸೇವಾ ಕ್ಷೇತ್ರದಲ್ಲಿನ ತಮ್ಮ ಸೇವೆಗಾಗಿ, ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಂದ ಪದ್ಮಶ್ರೀ ಪುರಸ್ಕಾರವನ್ನು ಪಡೆದಿದ್ದ ಡಾ ಜಿತೇಂದರ್ ಸಿಂಗ್ ಅವರಿಂದಲೇ ಸಮಾಜಸೇವಾ ಕ್ಷೇತ್ರಕ್ಕಾಗಿಯೇ ಈ ಪುರಸ್ಕಾರವನ್ನು ಪಡೆದಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ.

Post a Comment