ನಗರಸಭೆಗೆ ದಿಡೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್ ನೀಡಿದ ಶಾಸಕ ಹೆಚ್.ಪಿ. ಸ್ವರೂಪ್

  ಹಾಸನ: ನಗರಸಭೆಗೆ ಕ್ಷೇತ್ರದ ಶಾಸಕರಾದ ಹೆಚ್.ಪಿ. ಸ್ವರೂಪ್ ಅವರು ಗುರುವಾರ ದಿಡೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್ ನೀಡಿದರು. ಈ ವೇಳೆ ಹಾಜರಾತಿ ಪುಸ್ತಕ ನೋಡಿದಾಗ ಕೆಲಸ ಮಾಡುವ ಕೆಲ ಅಧಿಕಾರಿಗಳು ಬೆಳಗಿನದು, ಮದ್ಯಾಹ್ನದ ಸಹಿ ಮೊದಲೆ ಹಾಕಿದ್ದು, ಇನ್ನು ಕೆಲವರು ನಾಳೆಯ ಸಹಿಯನ್ನು ಮೊದಲೇ ಹಾಕಿ ಕಛೇರಿಯಲ್ಲೆ ಇಲ್ಲದಿರುವುದು ಕಂಡು ಬಂದಾಗ ಶಾಸಕರು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರು ಯಾರೆ ನಗರಸಭೆಗೆ ಬಂದಾಗ ಅಲೆಸದೆ ಶೀಘ್ರ ಕೆಲಸ ಮಾಡಿಕೊಡುವಂತೆ ಕಡಕ್ ಸೂಚನೆ ಕೊಟ್ಟರು.



ನಂತರ ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡರ ಕೊಠಡಿಯಲ್ಲಿ ಶಾಸಕರು ನಗರಸಭೆಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ಕರೆಯಿಸಿ ಸಭೆ ಮಾಡಿ ಇಲ್ಲಿನ ಆಗುಹೋಗುಗಳ ಬಗ್ಗೆ ಚರ್ಚೆ ಮಾಡಲಿ ಸಲಹೆ ಸೂಚನೆ ನೀಡಿದರು.


ಇದೆ ವೇಳೆ ಮಾಧ್ಯಮದೊಂದಿಗೆ ಶಾಸಕರು ಮಾತನಾಡಿ, ಈಗಾಗಲೇ ಹಾಸನ ನಗರ ನಗರಪಾಲಿಕೆಗೆ ಸೇರಲ್ಪಟ್ಟಿದ್ದು, ಹಾಸನ ನಗರವು ೨೫ ಮತ್ತು ೧೨ ಹಳ್ಳಿ ಸೇರಿ ಒಟ್ಟು ೩೭ ಹಳ್ಳಿಗಳು ಹಾಗೂ ೭ ಪಂಚಾಯಿತಿ ನಗರಸಭೆಗೆ ಸೇರ್ಪಡೆ ಆಗಿದೆ. ಆ ಗ್ರಾಮಗಳಿಗೆ ಇ-ಖಾತೆ ಸಮಸ್ಯೆಗಳಿದ್ದು, ಈ ಹಿನ್ನಲೆಯಲ್ಲಿ ನಗರಸಭೆಗೆ ಅನಿರಿಕ್ಷಿತವಾಗಿ ಭೇಟಿ ನೀಡಿದ್ದು, ಸಂಬಂಧಪಟ್ಟ ರೆವಿನ್ಯೂ ಅಧಿಕಾರಿಗಳು, ಬಿಲ್ ಕಲೆಕ್ಟರ್ ಸೇರಿದಂತೆ ಎಲ್ಲಾರನ್ನು ಸಭೆಗೆ ಕರೆದು ವಿಚಾರಣೆ ಮಾಡಿ ಅವರಿಗೆ ಮೌಖಿಕವಾಗಿ ಹೇಳಲಾಗಿದೆ. ಸಾರ್ವಜನಿಕರು ಯಾರೆ ಬಂದರೂ ಕೂಡ ಆದಷ್ಟು ಶೀಘ್ರ ಕೆಲಸವನ್ನು ಅವರಿಗೆ ಮಾಡಿಕೊಡಬೇಕೆಂದು ಆದೇಶವನ್ನು ಕೊಡಲಾಗಿದೆ. ಸಂಬಂಧಪಟ್ಟ ಅಭಿವೃದ್ಧಿ ಕೆಲಸಕ್ಕೂ ಸಹ ಅಲ್ಲಿನ ಇಂಜಿನಿಯರ್ ಜೊತೆ ಚರ್ಚೆ ಮಾಡಲಾಗಿದೆ. ೩೫ ನಗರಸಭಾ ಸದಸ್ಯರು ಎಲ್ಲಾ ಪಕ್ಷದವರು ಸೇರಿ ಪಟ್ಟಿಯನ್ನು ಕೊಡಲಾಗಿದ್ದು, ಆಯಾ ವಾರ್ಡಿನಲ್ಲಿ ಕೆಲಸ ಯಾವುದು ಆಗಬೇಕಾಗಿದೆ ಎಲ್ಲಾವನ್ನು ಕೂಡ ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಿ ಎಂದು ಚರ್ಚಿಸಲಾಗಿದೆ ಎಂದರು. ಸಾರ್ವಜನಿಕರು ಮತ್ತು ನಾಗರೀಕರಿಗೆ ಕೆಲಸಗಳು ಆಗಬೇಕು ಮತ್ತು ಅನುಕೂಲವಾಗಬೇಕು ಎಂಬುದು ಮುಖ್ಯ ಉದ್ದೇಶದಲ್ಲಿ ಒಂದು ಸಭೆ ಮಾಡಲಾಗಿದೆ. ಈ ವೇಳೆ ಕಮಿಷನರ್, ಇಂಜಿನಿಯರ್, ಆರೋಗ್ಯಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು. ನಾನು ನಗರಸಭೆ ಬಂದಾಗ ಇಲ್ಲಿನ ಕೆಲ ಅಧಿಕಾರಿಗಳು ತಡವಾಗಿ ಬಂದಿರುವುದು ಬೆಳಕಿಗೆ ಬಂದಿದೆ. ಇನ್ನು ಮುಂದೆ ಈರೀತಿ ಆಗಬಾರದು. ಸಾರ್ವಜಕರ ಕೆಲಸ ಮಾಡಲು ಸರಿಯಾದ ಸಮಯಕ್ಕೆ ಬರಬೇಕೆಂದು ಸೂಚನೆ ಕೊಡಲಾಗಿದೆ. ಕೆಲವರು ವಾಟರ್, ಕಂದಾಯ ಸಂಗ್ರಹಕ್ಕೆ ಹೋಗಿರುವುದಾಗಿ ಹೇಳಿದ್ದಾರೆ. ಏನೆ ಕೆಲಸಗಳಿದ್ದರೂ ಕಂದಾಯ ಕಲೆಕ್ಷನ್ ಮುಗಿಸಿ ೧೧:೩೦ ಒಳಗೆ ನಗರಸಭೆ ಕಛೇರಿಯಲ್ಲಿ ಇರಬೇಕೆಂದು ಈಗಾಗಲೆ ಆದೇಶಗಳನ್ನು ಕೊಡಲಾಗಿದೆ. ನಗರಸಭೆಗೆ ಬಹಳಷ್ಟು ಕೆಲಸಗಳು ಆಗಬೇಕಾಗಿದೆ. ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರೆಲ್ಲಾ ಸೇರಿ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದರು.

Post a Comment

Previous Post Next Post